Thursday, October 14, 2010

ಹೊಸಬೆಳಕು ಮೂಡ್ತಾ ಇದ್ಯ ?

ಅದೇ ಹಳೇ ಆಫೀಸು, ಹಳೇ ಕ್ಯುಬಿಕಲ್ಲು, ಕಿತ್ತೋಗಿರೋ ಹಳೇ ಪ್ರಾಜೆಕ್ಟು, ತಿಪ್ಪರಲಾಗ ಹೊಡೆದರು ಫಿಕ್ಸ್ ಆಗದೆ ಇರೋ ಹಳೇ ಡಿಫೆಕ್ಟ್ಸು..ಈ ಎಲ್ಲ ಹಳೆಯ ಬೋರಿಂಗ್ ವಿಷ್ಯದ ನಡುವೆ ಮನಸ್ಸಿಗೆ ಖುಷಿ ಕೊಡೊಂಥ, ಹೊಸ ಹುರುಪು ತರುವಂತಹದನ್ನ ಏನಾರು ಮಾಡ್ಬೇಕು ... ಏನ್ ಮಾಡೋದು ?? ನಾನ್ ಏನ್ ಮಾಡ್ತೀನಿ..? ಟೈಂಪಾಸ್ ಗೆ ಆಗ್ ಆಗ ಬ್ಲಾಗ್ ಮಾಡ್ತಿದ್ದೆ, ಅಭ್ಯಾಸನು ಬಿಟ್ಹೋಯ್ತು. ಆಗೊಮ್ಮೆ ಈಗೊಮ್ಮೆ ಹೋಗುವ ಟ್ರೆಕ್ಕಿಂಗ್, ಫೋಟೋಗ್ರಫಿ ಟ್ರಿಪ್ ಗಳು ಈಗ ಸ್ವಲ್ಪ ಕಡಿಮೆ ಆಗಿದೆ. ಹಾಗಂತ ಈ ಹವ್ಯಾಸಗಳು ಬೋರ್ಆಯಿತು ಅಂತ ಅಲ್ಲ. ಈ ಎಲ್ಲದರ ಜೊತೆಗೆ ಹೊಸದು ಇನ್ಏನಾರು ಮಾಡ್ಬೇಕು ಅಂತ ತುಂಬಾ ದಿನಗಳಿಂದ ಆಸೆ ಇತ್ತು.

ಹೀಗಿರುವಾಗ Facebook ನಲ್ಲಿ ಒಂದ್ ದಿನ ಒಂದ್ notification ಬಂತು - ಹೊಸಬೆಳಕು ಅನ್ನೋ ನಾಟಕಕ್ಕೆ auditionನಡೆಯುತ್ತೆ, ಆಕ್ಟ್ ಮಾಡೋಕ್ಕೆ ಇಷ್ಟ ಇರೋರು ಬರಬಹುದು ಅಂತ. ನಾಟಕಗಳಲ್ಲಿ ಆಕ್ಟ್ ಮಾಡ್ಬೇಕ್ ಅಂತ ನಂಗು ಆಸೆ ಇತ್ತು.., ಹಾಗೆ, ಅದು ನಂಗೆ ಬರೋದಿಲ್ಲ ಅಂತನೂ ಗೊತ್ತಿತ್ತು. ಆದ್ರೆ audition ಹೋಗೋದ್ರಿಂದ ನಾನ್ ಕಳೆದುಕೊಳ್ಳೋದು ಏನು ಇರಲಿಲ್ಲ. Facebook ನಲ್ಲಿ ಇವೆಂಟ್ ಬಗ್ಗೆ ನೋಡಿದಾಗ ನಾನ್ ಯಾಕ್ ಇದಕ್ಕೆ ಹೋಗಬಾರದು ಅನ್ನಿಸಿತು. ಸೆಲೆಕ್ಟ್ ಆಗದೆ ಇದ್ರೂ ok, ಭಾಗವಹಿಸೋ ಅನುಭವನೆ ಹೊಸದಾಗಿರುತ್ತೆ ಅಂತ ನಾನು auditionಗೆ ಹೋದೆ.

ಅಲ್ಲಿ, ನಾನ್ ಆಕ್ಟ್ ಮಾಡೋಕ್ ಹೋಗಿದ್ದ ಪಾರ್ಟ್ ನ ಒಂದ್ ಎರಡ್ ಲೈನ್ ಕೊಟ್ಟು, ಹೇಳೋಕ್ಕೆ ಹೇಳಿದ್ರು..ನಂಗೆ ಬಂದಹಾಗೆ ನಾನು ಹೇಳ್ದೆ. HR ರೌಂಡ್ ಇಂಟರ್ವ್ಯೂ ಕೂಡ ಇತ್ತು . ನಾವು ಕಂಪನಿಗಳಲ್ಲಿ why do you want to work for this company ? ಅಂತ ಕೇಳೋ ಹಾಗೆ, ಅಲ್ಲಿ ಅವ್ರು : ನಾಟ್ಕ (ಮಾಡೋಕ್ಕೆ ಬರದೆ ಇದ್ರೂ) ಮಾಡೋ ಆಸೆ ಯಾಕೆ ಅಂತ ಕೇಳಿದ್ರು.. ನಾನು ಏನೋ ಒಂದ್ ಬಾಯಿಗ್ ಬಂದಿದ್ ಡೈಲಾಗ್ ಬಿಟ್ಟೆ, ಅದ್ನ ಕೇಳಿ ಅವ್ರು ನನ್ನ ಬಿಟ್ರು . ಆದ್ರೆ ನಮ್ directorದು ವಿಶಾಲವಾದ ಮನಸ್ಸು, ಅದ್ಕೆ crew ಕೆಲಸ ಕೊಟ್ರು, ನಾನು ಅದ್ಕೆ ಓಕೆ ಅಂದೆ.

ಈ ನಾಟಕದಲ್ಲೆ ನಾನು ಯಾಕೆ ಭಾಗಿಯಾಗಿದ್ದಿನಿ...ಹೇಳ್ತಿನಿ. ಮೊದಲೇ ಹೇಳಿದ್ ಹಾಗೆ ನಾನು ಒಂದು ಹೊಸ ಹವ್ಯಾಸ ರೂಢಿಸಿ ಕೊಳ್ಳಬೇಕು ಅಂತ ಇಷ್ಟ ಇತ್ತು. ನಾಟಕ ಕಲೆ ಕಲಿ ಬೇಕು ಅನ್ನೋದು ನನ್ನ ಸುಮಾರು ದಿನಗಳ ಆಸೆಯಾಗಿತ್ತು. ಆದರೆ ಹೇಗೆ ಸೇರೋದು. ಈ ನಾಟಕ ರಂಗನೂ ನಮ್ಮ IT ಕಂಪನಿ ಹಾಗೆ ದೊಡ್ಡ ಸಾಗರ. ಸಾಕಷ್ಟು ತಂಡಗಳು, ಸುಮಾರು ವರ್ಷಗಳಿಂದ ರಂಗದ ವಿವಿಧ ವಿಭಾಗಳಲ್ಲಿ ಕೆಲಸ ಮಾಡ್ತಾ ಬಂದಿರೋರು, ಅದನ್ನೇ proffession ಆಗಿ ತಗೊಂಡಿರೊರು ತುಂಬಾ ಜನ ಇದಾರೆ. ಹೀಗಿರುವಾಗ ನಾನ್ ಹೇಗ್ ಇಲ್ಲಿ ಎಂಟ್ರಿ ತಗೊಳ್ಳಿ ? ನಾನು PD ಕೆಲಸದ ಸ್ಟೈಲ್ ಮುಂಚೆ ನೋಡಿದ್ದೆ, ನಂಗೆ ಅದು ಹಿಡಿಸಿತ್ತು. ಅವ್ರು ಹೊಸ ನಾಟ್ಕ ಮಾಡ್ತಿದ್ದಾರೆ ಅಂತ ತಿಳಿದಾಗ, ಈ ಕಲೆ ಕಲಿಯಲು ಇದು ಒಳ್ಳೆ ಚಾನ್ಸ್ ಅನ್ನಿಸಿತು. ನನಿಗೆ ನಾಟಕ ಪ್ರತಿ ವಿಭಾಗವು ಹೊಸದ್ದಾದರಿಂದ, ನಾನು ಯಾವದೇ ಕೆಲಸಕ್ಕೂ ರೆಡಿ ಇದ್ದೆ. ಡೈಲಾಗ್ ಹೇಳೋಕ್ಕೆ ಅಂತ ಹೊದೊನು ಸದ್ಯಕ್ಕೆ ಈಗ ಡೈಲಾಗ್ ಹೇಳ್ಕೊಡು ಕೆಲಸ ಮಾಡ್ತಾ ಇದೀನಿ.., ಅಂದ್ರೆ ನಮ್ಮ cast, ಡೈಲಾಗ್ ಮರೆತರೆ ಅವ್ರಿಗೆ ಪ್ರಾಂಪ್ಟ್ ಮಾಡೋದು ನನ್ ಕೆಲಸ. ಈಗ ಸದ್ಯಕ್ಕೆ ಯಾರಿಗೂ ಕರೆಕ್ಟ್ ಆಗಿ ಎಲ್ಲ ಡೈಲಾಗ್ ಬರೋಲ್ಲ.., ನಂಗು ಸ್ವಲ್ಪ ಕೆಲಸ ಇದೆ, ಆದ್ರೆ ಅವ್ರು ಅದ್ನ ಕಲಿತಮೇಲೆ..ನಾನ್ ಏನ್ ಮಾಡ್ಲಿ ? :) ನೋ ಪ್ರಾಬ್ಲಮ್ .. ಆಮೇಲೆ ಬೇರೆ ಯಾವಾದ್ರು ಕೆಲಸ ಹೊಂಚಿಕೊಳ್ಳೋದು...ಯಾರೋ ದೊಡ್ಡ ಮನುಷ್ಯರು : Don't be just another brick in the wall ಅಂತ ಹೇಳಿದ್ದಾರಂತೆ. ಆದ್ರೆ ನಾನ್ ಅದ್ನ ಫುಲ್ ಒಪ್ಪೋಲ. ಗೋಡೆ ಸರಿಗ್ ನಿಲ್ಬೇಕ್ ಅಂದ್ರೆ ಪ್ರತಿ ಇಟ್ಟಿಗೆನು ಮುಖ್ಯ ಅಲ್ವ..? ಏನ್ ಹೇಳ್ತಿರ.. (ಡೈಲಾಗ್ ಚೆನ್ನಾಗಿದೆ ಅಂತ ಹಾಗ್ ಹೇಳಿದನ ಅಥವ ನಿಜವಾಗಿ ಹಾಗ್ ಯೋಚಿಸ್ತಿನ ಅಂತ ಮಾತ್ರ ಕೇಳಬೇಡಿ :) )

ನನ್ journey ಹೇಗಿತ್ತು ಅಂತ ಹೇಳ್ದೆ. ನಾಟಕದ ಬಗ್ಗೆ ಹೇಳೋಕ್ಕೆ ಇನ್ನು ವಿಷ್ಯ ಇದೆ. ರಿಹರ್ಸಲ್ ಹೇಗಿರುತ್ತೆ , ನಮ್ ಡೈರೆಕ್ಟರು ಹೇಗೆ ಉಗ್ದು ಉಪ್ಪಿನಕಾಯಿ ಹಾಕ್ತಾರೆ ಅಂತ ಹೇಳ್ಬೇಕು... ಆದ್ರೆ ಅದ್ಕೆ ಬೇರೆ ಆರ್ಟಿಕಲ್ ಬರಿತಿನಿ. ಸದ್ಯಕ್ಕೆ ಇಷ್ಟು ಸಾಕು..

ಈ ಹೊಸಬೆಳಕು ನಾಟ್ಕ ನನ್ನಲಿ ಹೊಸಬೆಳಕು ಮೂಡ್ಸುತ್ತ..ಕಾದು ನೋಡ್ಬೇಕು..

ps: looking forward to more articles from you santosh!

No comments:

Post a Comment