Thursday, December 9, 2010

Vasu's Blog

 
 ಆಫೀಸ್ ಮುಗಿದ ಮೇಲೆ ಕ್ರಿಕೇಟಗೆ ಹೋಗೋಣ ಅಂತ ಪ್ಲಾನ್ ಮಾಡಿದ್ದೆ, ಸರಿ ಯಾವುದಕ್ಕೂ ವಿನಯನ ಕೇಳೋಣ ಅಂತ ಫೋನ್ ಮಾಡಿದೆ. ಇವತ್ತು ಆಡಿಶನ್ ಇದೆ ಅಂತ ಗೊತ್ತಾಯಿತು, ಯಾವತ್ತು ನೋಡಿರಲಿಲ್ಲ ಸರಿ ಕ್ರಿಕೆಟ್ ಬೇಡ ಅಂದುಕೊಂಡು ಒಳ್ಳೆ ಸಂಜೆಲ್ಲಿ ಕೆ.ಹೆಚ್.ಕಲಾಸೌಧಕ್ಕೆ ಬಂದೆ ತುಂಬಾ ಮಜವಾಗಿತ್ತು ಆಡಿಶನ್, ಕೊನೆ ಸಮಯ ಹತ್ತಿರ ಬರುತ್ತ ಆಸೆ ಹುಟ್ಟುಕೊಳ್ಳುತ್ತಾ ಇರಬೇಕಾದರೆ ವಿನಯ್, ಅನು ಮತ್ತು ಸುಜಯ್ ನೀನು ಹೋಗು ಅಂತ ಹೇಳಿದ ಮೇಲೆ, ಯಾರು ಅದು ವರೆಗೂ ಮಾಡದ ಕ್ಯಾರಕ್ಟರ್ "ಶರ್ಮ" ಗೆ ಅಡಿಶನ್ ಕೊಟ್ಟೆ.
  ಪಿ.ಡಿ.ಸತೀಶ್ ರವರ ಗೈಡೆನ್ಸಲ್ಲಿ ಮತ್ತು ಅವರ ಕೊಟ್ಟ ಮಾರ್ಗದರ್ಶನದಲ್ಲಿ ಮೂರು ಪ್ರದರ್ಶನದಲ್ಲಿ ನಟಿಸಿ ಮತ್ತೊಂದು ಪ್ರದರ್ಶನದಲ್ಲಿ ಸಂಗೀತ ನಿರ್ವಹಣೆಯಲ್ಲಿ ಪಾಲ್ಗೊಂಡೆ, ಒಟ್ಟಾರೆ ಫೋರ್ತ್ ಕಾರ್ನರ್ ತಂಡ ನಮಗೆಲ್ಲ ಒಂದು ಕುಟುಂಬದವರ ಹಾಗೆ ಕಂಡು ಬೇಗ ಬೆರೆತು, ಒಂದು ಯಶಸ್ಸಿನ ಪರಿಸರ ಕಂಡೆವು.
   * ತುಂಬಾ ತರಲೆ
   * ಜಾಸ್ತಿ ಜನ
   * ಪ್ರಶಾಂತ್ ಹೋಟೆಲ್ ಬಿರಿಯಾನಿ
   * ಬೇಜಾನ್ ಅವಾಜಗಳು
   * ಕದ್ದು-ಮುಚ್ಚಿ ಅಗ್ನಿಕಾರ್ಯ
   * ಬ್ಲೂ ವಿಂಗ್ಸ್ ಮೀಟಿಂಗ್
   * ಸಿ ಬಿ ಆರ್ ಪಾರ್ಟಿ ಇವೆಲ್ಲಾ ಮರೆಯಲಾಗದ ವಿಷಯಗಳು.
      "ಹೊಸಬೆಳಕು" ನಾಟಕವನ್ನು ಹೊಸಬರ ಕೈಯಿಂದ ಮಾಡಿಸಬೇಕೆಂಬ ಹಾಗು ಕೆ.ಹೆಚ್.ಕಲಾಸೌಧಕ್ಕೆ ಹೊಸ ಆಡಿಯನ್ಸನ್ನು ಬರಮಾಡಬೇಕು ಎಂಬ ಹೊಸ ಯೋಚನೆಯನ್ನು ಮಾಡಿರುವ ಮತ್ತು ನಮ್ಮೆಲ್ಲರ ಮೇಲೆ ಹೊಸಬೆಳಕನ್ನು ಚೆಲ್ಲಲು ದಾರಿ ಮಾಡಿಕೊಟ್ಟ ಪಿ.ಡಿ ಸರ್ ರವರಿಗೆ ಧನ್ಯವಾದ ಮತ್ತು ಶುಭವಾಗಲಿ.


Thanks & Regards,
V.Vasukeshan

No comments:

Post a Comment