Thursday, December 9, 2010

ಹೊಸಬೆಳಕಿನ ಕಹಾನಿ ಸಂತೋಷ್ ಕಿ ಜಬಾನಿ




ಮತ್ತದೇ ಬೇಸರ, ಅದೇ ಸಂಜೆ, ಅದೇಕಾಂತ...:P lousy weekend evening..ಎಲ್ಲೂ ಹೋಗ್ದೆಲೆ ಬೆಳ್ಳಿಗ್ಗೆ ಇಂದ ಮನೇಲೆ ಬಿದ್ಗೊಂಡು ಕಾಲ ಕಳಿತಾ ಇದೀನಿ...atleast ನನ್ನ ಹೊಸಬೆಳಕಿನ ಸ್ಟೋರಿ ಯಾಕ್ continue ಮಾಡಬಾರದು ? ಬರೀಬೇಕು ಅಂತ ಬಾಸ್ ಇಂದ ಆರ್ಡರ್ ಬೇರೆ ಆಗಿದೆ....ಸೊ here it comes....ಓದಿ ಆನಂದಿಸಿ ಹೊಸಬೆಳಕಿನ ಕಹಾನಿ ಸಂತೋಷ್ ಕಿ ಜಬಾನಿ, ಪಾರ್ಟ್ 2 :)

ಮುಂಚಿನ ನನ್ನ article ನಲ್ಲಿ ನಾನ್ ಈಗ ಆಗ್ಲೇ audition ಟು ರಿಹರ್ಸಲ್ journey ನ ಹೇಳಿದೀನಿ. ಈಗ ಅಲ್ಲಿಂದ ಮುಂದುವರೆಸೋಣ..ಮುಂದೆ ಓದೋಕ್ಕೆ ಮುಂಚೆ part 1 ಸ್ಟೋರಿನ ಓದ್ಕೊಂಡ್ ಬನ್ನಿ..(ನನ್ನ ಅಮೂಲ್ಯ ವಾದ ಟೈಮ್ ಸ್ಪೆಂಡ್ ಮಾಡಿ ಬರೆದಿದಕ್ಕೆ ಸ್ವಲ್ಪ ನಾರು use ಆಗುತ್ತೆ ) . ರಿಹರ್ಸಲ್ಸ್ ಮುಗಿತ ಬಂದಿತ್ತು..ಎಲ್ಲ ಆರ್ಟಿಸ್ಟ್ ಗಳು ತಮ್ಮ ತಮ್ಮ ಡೈಲಾಗ್ ನಲ್ಲಿ ಆಗ್ಲೇ ಪಂಟರುಗಳಾಗಿದ್ದರು, ಆದ್ರಿಂದ ನನ್ನ ಕೆಲಸ ನು ಕಮ್ಮಿ ಆಗಿತ್ತು...ಖುಷಿ ಆಗಿತ್ತು, ನನ್ನ್ನ ಕೆಲಸ ಕಮ್ಮಿ ಆಯ್ತು ಅಂತ ಅಲ್ಲ...atleast ಅಷ್ಟ ದಿನ ಆದ್ಮೆಲಾದ್ರು ಸರಿಗೆ ಕಲಿತರಲ್ಲ ಅಂತ, ಇಲ್ಲಾಂದ್ರೆ ಶೋ ನೆಡಿಯೋವಾಗ ಕರ್ಟನ್ ಸೈಡ್ ಅಲ್ಲಿ ನಿಂತು ಪ್ರಾಂಪ್ಟ್ ಮಾಡಬೇಕಿತ್ತು...ನನ್ ಪುಣ್ಯ ಬಚಾವ್ ಆದೆ :P. ಈ ಕೆಲಸ ಆದ್ಮೇಲೆ ನಂಗೆ ಕೊಟ್ಟ (ನಾನು ಮಾಡಿದ) next ಕೆಲಸ ಟಿಕೆಟ್ ಕೊಡುದು. ಟಿಕೆಟ್ ಕೌಂಟರ್ ನಲ್ಲಿ ನನ್ನ ಜೊತೆ ಇದಿದ್ದು ಅಶ್ವಿನಿ. ನಾವು ಕೆಲಸ ನ ಡಿವೈಡ್ ಮಾಡ್ಕೊಂಡಿದ್ವಿ. ಟಿಕೆಟ್ ಕೊಡೋದು ಅಶ್ವಿನಿ, ಆದ್ರೆ ದುಡ್ಡು ಇಸ್ಕೊಳುದು ನಾನು..:). ಇದು ಇಂಟರೆಸ್ಟಿಂಗ್ ಕೆಲಸ ಅಲ್ದೆ ಇದ್ರೂ ಬೋರಿಂಗ್ ಕೆಲಸ ಅಂತು ಅಲ್ಲ. ಟಿಕೆಟ್ ಕೌಂಟರ್ ನಲ್ಲಿ ಕೂರೋದ್ರಿಂದ ಒಂದ್ ಒಳ್ಳೆ advantage ಇದೆ. ಶೋ ಗೆ ಬಂದಿರುವವರನೆಲ್ಲ ನೋಡೋಕ್ಕೆ (ಲೈನ್ ಹೊಡೆಯೋದಿದ್ರೆ ಹೊಡಿಯೋಕ್ಕೆ) ಅದು ಒಳ್ಳೆ ಜಾಗ..:P . 3rd ಶೋ ದಿನ ಸ್ವಲ್ಪ ಬೋರ್ ಆಯಿತು. ಆವತ್ ಮಳೆ ಬಂದಿದರಿಂದ tickets ಜಾಸ್ತಿ ಸೇಲ್ ಆಗ್ಲಿಲ್ಲ . ನಾಲ್ಕನೆ ಶೋ ದಿನ ತುಂಬಾ ಜನ, ಫುಲ್ ಬ್ಯುಸಿ, ತುಂಬಾ tickets ಸೇಲ್ ಆಯಿತು, ಜೇಬು ತುಂಬಾ ದುಡ್ಡು ಬಂತು, ಸ್ವಲ್ಪ ಹೊತ್ನಲ್ಲೇ ಅದು ಖಾಲಿ ನು ಆಯಿತು. ನಮ್ ಕುಮಾರಣ್ಣ ಲೆಕ್ಕದಲ್ಲಿ ಪಕ್ಕ, collection ದುಡ್ಡೆಲ್ಲ ಅವ್ರಿಗೆ ಕೊಟ್ಟು ಸೈನ್ ಮಾಡಿದ್ರೆ ನನ್ ಅವತ್ತಿನ ಡ್ಯೂಟಿ ಮುಗಿತು.. J

ರಿಹರ್ಸಲ್ಸ್ ಬಗ್ಗೆ ಹೇಳ್ದೆ, ಶೋ ಬಗ್ಗೆನು ಸ್ವಲ್ಪ ಹೇಳ್ದೆ..ಈಗ ಇನ್ನು ಸ್ವಲ್ಪ details ಕೊಡ್ತಿನಿ. ಇಲ್ಲಿವರ್ಗು ನಡೆದ ನಾಲ್ಕು ಶೋ ಗಳಲ್ಲಿ ನಂಗೆ ಇಷ್ಟ ಆಗಿದ್ದು 2nd ಮತ್ತೆ 4th . ನನ್ ಪ್ರಕಾರ ಆ ಎರಡು ಪ್ರದರ್ಶನ ಚೆನ್ನಾಗಿ ಬಂತು, ಜನ ಕೂಡ ಚೆನ್ನಾಗಿ ಎಂಜಾಯ್ ಮಾಡಿದ್ರು. ನಾಲ್ಕನೆ ಶೋ ಇನ್ನೊಂದ್ ವಿಶೇಷ ಅಂದ್ರೆ ಅದ್ರಲ್ಲಿ ನಾನ್ ಆಕ್ಟ್ ಮಾಡಿದ್ದು ;-). ಮೊದಲ ಬಾರಿಗೆ ನಾನು ಒಂದ್ stage play ನಲ್ಲ್ಲಿ ಆಕ್ಟ್ ಮಾಡ್ದೆ, ಅದು ಸಹ ಡಬಲ್ ರೋಲ್...ಎಷ್ಟ್ ಜನ್ನಕೆ ಸಿಗುತ್ತೆ ಈ ಭಾಗ್ಯ :P. ನಾನು ಮೊದಲ ಸಲ ನಟಿಸಿದ experience ನ ಈಗ ನಿಮಗೆ ಹೇಳ್ತಿನಿ. ಮಾಮೂಲಿ ಹಾಗೆ ಅವತ್ತು ಸಹ ನಾನು ಟಿಕೆಟ್ ಕೌಂಟರ್ ಅಲ್ಲಿ tickets ಕೊಟ್ಟೆ. ಶೋ ಸ್ಟಾರ್ಟ್ ಆದ್ಮೇಲೆ ಬ್ಯಾಕ್ ಡೋರ್ ನಿಂದ ಬಂದು ನನ್ sceneಗೆ ರೆಡಿ ಆಗಬೇಕಿತ್ತು. ನನ್ ಮೈ ನಡ್ಗುತ್ತ ಇತ್ತು...ಛಳಿ, ಹೆದರಿಕೆ, ಟೆನ್ಶನ್ ಇಂದ. ಯಾಕ್ ಅಷ್ಟ ಹೆದರಿದ್ದೆ ಗೊತ್ತಿಲ್ಲ, ನನ್ ರೋಲ್ ಬಹಳ ಸಿಂಪಲ್ ಇತ್ತು..ಎರಡ್ ಲೈನ್ ..ನಂಗೆ ಅದು ಬರ್ತ್ತಿತ್ತು..ಆದರು ಭಯ. ಸರಿ ಅಲ್ಲೇ ಫ್ಲಾಸ್ಕ್ ಅಲ್ಲೇ ಟೀ ಇತ್ತು, ಸ್ವಲ್ಪ ಟೀ ಕುಡಿಯೋಣ ಅಂತ ಒಂದ್ ಸಿಪ್ ಎಳ್ಕೊಂಡೆ..,ಆಮೇಲೆ ಗೊತಾಯ್ತು ಅದು ಹಿಂದಿನ ದಿನದ್ದು ಅಂತ. ಕೆಟ್ಟದಾಗಿತ್ತು. ಮೊದ್ಲೇ nervous ಆಗಿದ್ದೆ, ಇನ್ನ ಜಾಸ್ತಿ ಆಯಿತು. ಸರಿ ಪಕ್ಕದ ರೂಂ ಗೆ ಹೋಗಿ ಬಿಸಿ ಟೀ ಬಗ್ಗಿಸಿಕೊಂಡು ಸ್ವಲ್ಪ ಕುಡ್ದೆ. ಕೈ ಯಲ್ಲಿ ಬಿಸಿ ಬಿಸಿ ಟೀ ಇದ್ರೂ ನಡಕ ಮಾತ್ರ ನಿಲ್ತಿಲ್ಲ. ಅಲ್ಲೇ ಇದ್ದ ನಮ್ಮ ಡಾಕ್ಟರ್ ದಯಾ ಅವರನ್ನ consult ಮಾಡ್ದೆ. ದಯಾ ಮತ್ತೆ ದೀಪಿ ನಂಗೆ ಸ್ವಲ್ಪ ಧೈರ್ಯ ಕೊಟ್ರು ಆದ್ರೆ ನನ್ nervousness ಕಮ್ಮಿ ಆಗ್ಲಿಲ್ಲ. 
             ಮೊದಲನೇ scene ಆದ್ಮೇಲೆ ನಾನ್ ಎಂಟ್ರಿ ತಗೋಬೇಕು ಅನ್ನು ಯೋಚನೆನೆ ನಂಗೆ ಟೆನ್ಶನ್ ಕೊಡ್ತಿತ್ತು. scene ಮುಗಿತು, ಹೊಸಬೆಳಕು ಸಾಂಗ್ ಶುರುಆಯ್ತು. ಅದ್ ಮುಗಿದಮೇಲೆ ನನ್ ಎಂಟ್ರಿ, ಆದ್ರೆ ನಾನ್ ಇನ್ನು ಸರಿ ಹೋಗಿರಲಿಲ್ಲ. next ನಾನ್ ಹೋಗ್ಬೇಕು ನಾನ್ ಹೋಗ್ಬೇಕು..ಏನ್ ಮಾಡ್ತಿನೋ ಏನೋ ಅನ್ನೋ ಟೆನ್ಶನ್ರ.. ರವಿ ಆಗಿದ್ದ ಕುಲದೀಪ್ ಸಾಂಗ್ ಗೆ ಡಾನ್ಸ್ ಮಾಡ್ತಿದ್ದ, ಜನ ಅದ್ನ ನೋಡಿ ಎಂಜಾಯ್ ಮಾಡ್ತಿದ್ರು..ನಾನು ಸಹ ನನ್ scene ಬಗ್ಗೆ ಮರೆತು ಅದನ್ನ ಎಂಜಾಯ್ ಮಾಡ್ದೆ. ಟೆನ್ಶನ್ ನಿಧಾನ್ನಕ್ಕೆ ದೂರ ಆಯಿತು. ನನ್ scene ಬಂದೆ ಬಿಡ್ತು, ಸೂಪರ್ ಆಗಿ ಎಂಟ್ರಿ ತಗೊಂಡೆ, ಆಮೇಲೆ the rest is history :P...well, atleast scene ಹಾಳ್ ಮಾಡ್ಲಿಲ್ಲ, ಅಷ್ಟ ಸಾಕು..ಇದು ಡೆಲ್ಲಿ ಜೋಗ್ಗಿಂಗ್ scene ಕಥೆ. 
            ಇದಾದ ಮೇಲೆ ಇನ್ನು ಒಂದ್ scene ನಲ್ಲಿ ಬೇರೆ ಗೆಟಪ್ ಅಲ್ಲಿ   ಬರ್ತೀನಿ ನಾನು, ರೌಡಿ ಗಳ ಬಾಸ್ ಆಗಿ. ನಾನ್ scene ನಲ್ಲಿ ಪರದಾಡಿದ್ದು  ಇನ್ನೊಂದ್ ದೊಡ್ಡ ಸ್ಟೋರಿ...ರಿಹರ್ಸಲ್ ಟೈಮ್ ನಲ್ಲೆ ಸಿಕ್ಕಾಪಟ್ಟೆ ಜೋರಾಗಿ ಕೂಗಿ ಶೋ ನಲ್ಲಿ ವಾಯ್ಸ್ ಬರ್ದಾಗ್ ಮಾಡ್ಕೊಂಡೆ. ಎಂಟ್ರಿ ತಗೊಳೊವಾಗ ಪಲ್ಟಿ ಹೊಡೆದು ಸೊಂಟ ಮುರ್ಕೊಂಡೆ, ಶೋ ನಲ್ಲಿ ಲುಂಗಿ ಉದ್ರಿಸ್ಕೊಂಡೆ (well almost ). ಉದುರುತ್ತ ಇದ್ದಿದನ್ನ ಹೇಗೋ ಮೇಲೆ ಎತ್ಕೊಂಡೆ..ಈ scene ನಲ್ಲಿ ಕೂಡ ನನ್ನ ರೋಲ್ ಇದ್ದಿದು ಒಂದೇ ನಿಮಿಷ, ಆದರು ಅದ್ನ ಮಾಡೋದೇ ಒಂದ್ ದೊಡ್ಡ ಸಾಹಸ ಆಯಿತು. ಗಂಟಲು ಸರಿ ಹೋಗೋಕ್ಕೆ ಮೂರು ದಿನ ಬೇಕಾಯ್ತುಸೊಂಟದ ಮೂಳೆ ನೋವು ಒಂದ್ ವಾರ ಆದರು ಪೂರ್ತಿ ಹೋಗಲಿಲ್ಲ.. ಆದರು stage ಮೇಲೆ ಹೋಗಿ ನಟಿಸಿದ್ದು ಖುಷಿ ಕೊಡ್ತು. 
            ಒಂದು ಬೇಜಾರ್ ವಿಷ್ಯ ಏನ್ ಅಂದ್ರೆ ಇಲ್ಲಿ ತನಕ ಒಂದ್ ಶೋ ಕೂಡ ನಾನ್ ಪೂರ್ತಿ ಆಗಿ ನೋಡೋಕ್ಕೆ ಆಗಿಲ್ಲ. ಸೊ next ಶೋ ನಲ್ಲಿ audience ಜಾಗ ದಲ್ಲಿ ಕೂತು ಫುಲ್ ಶೋ ನೋಡ್ಬೇಕು ಅಂತ...ನೋಡೋಣ ಅದು ಸಾದ್ಯ ಆಗುತ್ತಾ ಅಂತ..

ರಿಹರ್ಸಲ್ ಆಯಿತು, ಶೋ ಆಯಿತು...ಆಮೇಲೆ...? ಆಮೇಲೆ ಇನೆನ್ನು..Its party time..ಕಾಸ್ಟ್ ಪಾರ್ಟಿ ಬಗ್ಗೆ ಎರಡ್ ಲೈನ್ ಬರೆದ ಬಿಡ್ತೀನಿ. ನಾನ್ ಮೊದ್ಲು  ಈ ಪಾರ್ಟಿ ಹೆಸರು 'ಕಾಸ್ ಪಾರ್ಟಿ' ಅನ್ಕೊಂಡಿದ್ದೆ. ಏಕಂದ್ರೆ ಶೋ ಕಾಸ್ ಇಂದ ಮೂಡೋ ಪಾರ್ಟಿ ಅಲ್ವ, ಅದ್ಕೆ ಕಾಸ್ ಪಾರ್ಟಿ ಅಂತ ಕರೆತಾರೆ ಅನ್ಕೊಂಡೆ..ಆಮೇಲೆ ಗೊತ್ಹಾಯ್ತ್ ಇದರ ಹೆಸರು ಕಾಸ್ಟ್ ಪಾರ್ಟಿ ಅಂತ.  ಈ ಪಾರ್ಟಿ ವಿಶೇಷ ಅಂದ್ರೆ ಪ್ರತಿಯೋಬ್ರು ಬೇರೆಯವರ ಬಗ್ಗೆ ಅವರ ಅಭಿಪ್ರಾಯ ಹೇಳ್ಬೇಕ್..ನಮ್ ಟೀಂ ನಲ್ಲಿ ತುಂಬಾ ಜನ ಇದಿದ್ದರಿಂದ  ನಂ ಚಾನ್ಸ್ ಬರೋ ಹೊತ್ತಿಗೆ, ಹೇಳೋರು ಕೇಳಿಸ್ಕೋ ಳೋರು ಇಬ್ರು ಟೈಟ್ ಆಗಿದ್ರು. ಸೊ ಯಾರ್ ಯಾರ್ ಏನ್ ಹೇಳಿದ್ರು ಸರಿಗ್ ನೆನಪಿಲ್ಲ. ಮಾರನೇ ದಿನ ಆಫೀಸ್ ಅಲ್ಲಿ ಚೆನ್ನಾಗಿ ನಿದ್ದೆ ಮಾಡ್ದೆ ಅಂತ ಮಾತ್ರ ಗೊತ್ತು. ಪಾರ್ಟಿ ಮಾಡೋಕ್ಕೆ,  ಮತ್ತೆ ಅಲ್ಲೇ ಹಾಲ್ಟ್ ಮಾಡೋಕ್ಕೆ ಜಾಗ ಕೊಟ್ಟ ಚಂದಸ್ಮಿ ಅವರಿಗೆ ಥ್ಯಾಂಕ್ಸ್ J

ಬ್ಲಾಗ್ ಎಂಡ್ ಮಾಡೋಣ ಸಾಕು...ಹೇಗೆ ಎಂಡ್ ಮಾಡೋದ್ ಅಂತ ಯೋಚಿಸೋಕ್ಕೆ ಟೈಮ್ ಇಲ್ಲ..ಹೊಸ ಥಿಯೇಟರ್ audience ನ ಹುಟ್ಟು ಹಾಕಬೇಕು ಅನ್ನೋ ನಮ್ಮ director ಮತ್ತು  ಅವರ ಸ್ನೇಹಿತರ ಆಸೆಯನ್ನ  ಈ ಹೊಸಬೆಳಕು ನಿಜ ಮಾಡಿದೆ ಅಂತ ಮಾತ್ರ ಹೇಳಬಲ್ಲೆ. ಟಿಕೆಟ್ ಕೌಂಟರ್ ಅಲ್ಲಿ ಕೂತು ನಾನೇ ನೋಡಿರೋ ಹಾಗೆ ಯಾವತ್ತು ನಾಟಕ ನೋಡದೆ ಇರುವವರು ಸಹ ಬಂದು ಇದನ್ನ ನೋಡಿ, ಒಳ್ಳೆ ಅಭಿಪ್ರಾಯ ಕೊಟ್ರು. ನಾಟಕದ ಬಗ್ಗೆ ಏನು ಗೊತ್ತಿಲ್ಲದ ನಂಗು ಸಹ ಇದರ ಮೇಲೆ ಆಸಕ್ತಿ ಬರೋ ಹಾಗೆ ಮಾಡ್ತು. ಈ ನಾಟಕ ಸ್ವಲ್ಪ ಹೊತ್ತಿನ ಮಟ್ಟಿಗೆ ನಮ್ಮ ಟೈಮ್  ನ ತಗೊಂಡು ನಮ್ಮೆಲರ ಬಾಳಲ್ಲಿ ಹೊಸಬೆಳಕು ತಂದುಕೊಟ್ಟಿತು :P 

No comments:

Post a Comment